ಶಶಿಯಿಲ್ಲದ ಆಗಸದಿ
ಕಾರ್ಮೋಡವು ಒಗ್ಗೂಡಲು |
ಬಿರುಗಾಳಿಯ ಆರ್ಭಟದಿ
ಬಹುತೆರೆಗಳು ಮೇಲೇರಲು |
ಅಪ್ಪಳಿಸಿತು ಉದ್ರೇಕದಿ
ಅವಳ ನೋವ ಅಲೆಗಳು ||
ಅರಸಿಹಳೊ೦ದು ಆಶ್ರಯ
ದೂರದಡದಿ ಕುಳಿತಿರಲು |
ಜೀವನದ ಅನಿಶ್ಚಯ
ಮನಸೆಲ್ಲವ ಕಾಡಿರಲು |
ಭಾವನೆಗಳ ಅಭಿನಯ
ತನ್ನಾತ್ಮವ ಕೊಂದಿರಲು ||
ಆಶಾಛವಿಯ ಕಿರಣಗಳು
ತಾಮಸವ ಕಳೆದಿರಲು |
ಭರವಸೆಯ ತಂಗಾಳಿಯು
ನೆಮ್ಮದಿಯ ತಂದಿರಲು |
ಹಳೆ ದುಃಖವ ಮರೆತಿಹಳು
ಸಬಲೆಯಾಗಿ ನಗುತಿರಲು ||
2 comments:
:)
ನಿರಾಸೆಯಿಂದ ಆಶಾವಾದಿಯತ್ತ ತಿರುಗುವ ಕವನ ಚೆನ್ನಾಗಿದೆ.
Post a Comment