Saturday, August 15, 2009

Hamma Hamma ---- kannada version could be like this???

ಅಂದು ಅರಬಿ ಕಡಲಲ್ಲಿ,
ಒಂದು ಹುಡುಗಿಯ ಕಂಡೆ ನಾ,
ಅವಳಂದ ಚಂದವ ನೋಡುತಲೀ,
ಸೋತೇ ನಾನಲ್ಲಿ... ಹಮ್ಮ.. ಹಮ್ಮ... ಹಮ್ಮ ಹಮ್ಮ ಹಮ್ಮ....

ಇವಳು ರಂಭೆ-ಊರ್ವಶಿಯೋ,
ಧರೆಗಿಳಿದಾ ಮೇನಕೆಯೋ,
ಇವಳಾ ಮೈಮಾಟವ ನೋಡುತಲೀ,
ಸೋತೇ ನಾನಲ್ಲಿ... ಹಮ್ಮ.. ಹಮ್ಮ... ಹಮ್ಮ ಹಮ್ಮ ಹಮ್ಮ....

ಒಮ್ಮೆ theatreನಲಿ, ಒಮ್ಮೆ parkನಲಿ ; ನಾನು ನಿನ್ನ ಕಂಡೆ |
ಮನೋಲ್ಲಾಸವ, ಹುಚ್ಚು - ಪ್ರೇಮವ; ನೀನು ತಂದು ಕೊಟ್ಟೆ ||

lalbaghನಲಿ cubbon parkನಲಿ; ನಾನು ನಿನ್ನ ಕಂಡೆ|
ನಿನ್ನ ನೋಡುತಲಿ ಪ್ರೀತಿ ಮಾಡುತಲಿ,
ಸೋತೇ ನಾನಲ್ಲೇ.... ಹಮ್ಮ.. ಹಮ್ಮ.... ಹಮ್ಮ ಹಮ್ಮ ಹಮ್ಮ....

Wednesday, August 5, 2009

ಪಶ್ಚಾತ್ತಾಪ


ಕಯ್ಯಲಿ ಚಕಮಕಿಸುತಿಹ ಚಾಕು - ಆಗಿಹುದು ಹರಿತ |
ಮನದಲಿ ಬಡಬಡಿಸುತಿಹ ಇಚ್ಛೆ - ಭರವಾದ ಇರಿತ ||

ಈ ಪರಿಯ ಕ್ರೌರ್ಯವ ಎಸಗುವುದು - ನನ್ನ ಇಂಗಿತ |
ಸಂಚಿನ ಅರಿವಿಲ್ಲದೆ ನೀ ಮಲಗಿರುವೆ - ಚಿಂತಾ-ರಹಿತ ||

ಒಂದು ಕಯ್ಯಲಿ ಹಿಡಿದೆನು ನಿನ್ನ ಶರೀರವ |
ತಡೆಯಲಾರದೆ ಹೋದೆನು ಮನದ ಉದ್ವೇಗವ ||

ತ್ವರಿತದಲಿ ಇರಿದೆನು ನಿನ್ನ ಕೋಮಲ ಹೊಟ್ಟೆಯನು |
ಚಿಮ್ಮಿತು ನಿನ್ನ ನೆತ್ತರು; ನಡುಗಿಸಿತು ನನ್ನ ಕೈಗಳನು ||

ಜೀವದ್ರವವು ಹರಿಯುವುದ ನೋಡಿ ಅದೇಕೋ ಅರಿಯೆ |
ಚಿತ್ತದಿ ಹೊರಹೊಮ್ಮಿತು ಯೋಚನೆ - ನಾ ಮಾಡಿದ್ದು ಸರಿಯೆ? ||

ತಡೆಯಲಾರದೆ ಮನದ ದುಗುಡದ ನಿರ್ಭರ |
ಹರಿಯಿತು ಕಣ್ಣೀರ ಧಾರೆಯ ಮಹಾಪೂರ ||

ಕಂಬನಿ ಇಟ್ಟರೂ, ಇದರಿಂದ ತಗುಲಿತೇ ನನಗೆ ಪಾಪ |
ಅಥವಾ ಮಾಡಿಹ ಕೃತ್ಯಕ್ಕೆ ಇದೇ ದೇವರಿಟ್ಟ ಶಾಪ? ||

ಪಶ್ಚಾತ್ತಾಪದಿ ಕ್ಷಮೆ ಯಾಚಿಸುವೆ - ನನ್ನೀ ನೀರಸ ಸ್ಥಿತಿಯಲ್ಲಿ |
ಹೇ ಸ್ವಾದ-ಭೋಗದ ರಾಣಿ - ನನ್ನ ಮೆಚ್ಚಿನ ಈರುಳ್ಳಿ....... ||


ಈರುಳ್ಳಿ ಹೆಚ್ಚುವಾಗ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ, ನನಗೆ ಬರೆದು ತಿಳಿಸಿ....... :)