Sunday, September 14, 2008

USಗೆ ಬಂದಮೇಲೆ ಇಲ್ಲಿಯ ಜೀವನದ ಬಗ್ಗೆ ಕೆಲವು ಅನಿಸಿಕೆಗಳು...

ಸಮುದ್ರರಾಜನ
ವೈಶಾಲ್ಯದ ಮೇಲೆ ಹಾರಿ ಬಂದೆ |
ನೀರೇ ಇಲ್ಲದ ಮರುಭೂಮಿಯಲ್ಲಿ ಇಳಿದು ನಿಂದೆ ||
ಪ್ರೀತಿ-ವಾತ್ಸಲ್ಯದಿಂದ ತುಂಬಿದ ವಾತಾವರಣವ ತೊರೆದೆ |
ಬೂಟಾಟಿಕೆಯ ಮಮತೆ, ನಾಟಕೀಯ ನಡತೆಯ ಕಂಡು ಬೆರಗಾದೆ ||

ಹೊರದೇಶದ ಬಾಳಿನಲ್ಲಿ
ಕಾಣುತಿದೆ ಜೀವನದ ವೈವಿಧ್ಯಮಯ ಮುಖ...
ನನ್ನವರು ಇರುವರು ನನ್ನ ದೇಶದಲ್ಲಿ
ಇದ ನೆನೆಯುವುದರಲ್ಲಿದೆ ಒಂದು ಬಗೆಯ ಸುಖ...


ಇಲ್ಲಿಯ ಜೀವನ ಶೈಲಿಯನ್ನು ರತ್ನನ ಪದಗಳ ಧಾಟಿಯಲ್ಲಿ ಹೀಗೆ ಹೇಳಬಹುದು ಅಲ್ವೇ?

ನೋಡಾಕ್ ಒಂದ್ photo-id,
ವಿಚಾರ್ಸಕ್ ಒಂದ್ email-id,
ಬರ್ ಬೇಕು english ಕೊಂಚ....
ಉಜ್ಜಾಕ್ ಒಂದ್ credit-card,
ಇಲ್ದೇದ್ರೆ debit-card,
ಇದ್ರಾಯ್ತು american ಪರ್ ಪಂಚ....
ಹೊಸ ವರ್ಷದ ಶುಭಾಶಯಗಳನ್ನು ನನಗೆ ತೋಚಿದಂತೆ ಹೇಳಿದ್ದನ್ನು ಇಲ್ಲಿ ನನ್ನ ಪುಟ್ಟ ಸಂಕಲನದ ಮೊದಲ ಪದ್ಯವನ್ನಾಗಿ ಅರ್ಪಿಸುತ್ತಿದ್ದೇನೆ....

ಬೀಳಲಿ ನಿಮ್ಮ ಮೇಲೆ ಹರ್ಷಗಳ ವರ್ಷ |
ಆಗಲಿ ಯಶಸ್ಸಿನ ಉತ್ಕರ್ಷದ ಸ್ಪರ್ಶ ||
ನಡೆಯಲಿ ಆದರ್ಶಗಳ ಪರಾಮರ್ಶ |
ಚೈತನ್ಯ ಸ್ಫೂರ್ತಿಗಳ ತರಲಿ ಹೊಸ ವರ್ಷ ||


ಆತಂಕವಾದವು ಹೆಮ್ಮರದಂತೆ ಬೇರೂರಿ ಬೆಳೆದಿರುವ ಸಮಯದಲ್ಲಿ ಪ್ರೀತಿಯ ಬಗ್ಗೆ ನನಗೆ ತೋಚಿದ್ದು....

ನಿಶೆಯ
ಕತ್ತಲಲಿ ಶಶಿಯ ಅನುಪಸ್ಥಿತಿಯಲಿ
ಅಂತರಾಳದಿಂದ ಹೊರಹೊಮ್ಮುವುದು ಭೀತಿಯ ಜ್ವಾಲಾಗ್ನಿ....
ಹಗಲಿನ ಬೆಳಕಲ್ಲಿ ಅರ್ಕನ ಆಕ್ರೋಧದಲಿ
ಮೂಡುತಿದೆ ಏಕೆ ಮಾನವರಲಿ ದ್ವೇಶದ ಜಠರಾಗ್ನಿ?

ಪ್ರೀತಿಯಿಂದಲೇ ಮಿಲನ, ಪ್ರೀತಿಯಿಂದಲೇ ಜೀವನ....
ದೈವ ಭಕ್ತಿಯೊಂದಿಗೆ, ತೋರುವುದು ಸಮಾನ ತುಲನ..
ದ್ವೇಶ-ಅಸೂಯೆ ಎಂಬುದು ಒಂದು ಕರಾಳ ಕಾನನ...
ಅದನು ತೊರೆದರೆ ಇರುವುದು ಸುಖವು ಕ್ಷಣ-ಕ್ಷಣ....