ಕಡಲಲ್ಲಿನ ಸೊಬಗ; ಒಡಲಲ್ಲಿ ಹೊಂದಿರುವೆ |
ಪ್ರೇಮ-ನಾವಿಕನ ವಿಹರಿಸುವ ಮೋಹದಲೆ ನೀನೆ ||
ಕಂಡು ಎದೆಯಲ್ಲಿಯ ಪ್ರತಿಮೆ; ಚಿಮ್ಮಿತುಲ್ಲಾಸದ ಚಿಲುಮೆ |
ಮನ-ಕಾರಂಜಿಯ ಸಜಿಸುವ ವರ್ಣೋದಕ ನೀನೆ ||
ಕ್ಷಣ-ಕ್ಷಣವು ನೀನಿರುವೆ; ನೆನಪಾಗಿ ಕಾಡಿರುವೆ |
ಕಣ-ಕಣದಿ ಹರಿಯುತಿಹ ಜೀವರಸ ನೀನೆ ||
ಉಸಿರಲ್ಲಿ ಉಸಿರಾಗಿ; ಕಣ್ಣ ನೋಟವೇ ನೀನಾಗಿ |
ಕಿವಿಯಲ್ಲಿ ನುಡಿಯುತಿಹ ಪ್ರಣಯರಾಗವು ನೀನೆ ||
ಮನದಲ್ಲಿ ತುಂಬಿರುವೆ; ನೆರಳಾಗಿ ಜೊತೆಗಿರುವೆ |
ಹೃದಯದಲಿ ಅನುಘರ್ಜಿಸುವ ಪ್ರೇಮ-ದು೦ದುಭಿ ನೀನೆ ||
ಶೃಂಗಾರದ ಆಗಸದಿ; ಶಶಿಯ೦ತೆ ಬೆಳಗಿರುವೆ |
ಈ ಮಿಲನದ ಕರೆಯೋಲೆಯ ಹಸ್ತಾಕ್ಷರ ನೀನೆ ||